ದೇಹಚ್ಛೇದ, ಜೀವಂತ  

ವೈದ್ಯಕೀಯ ಪ್ರಯೋಗ ಸಂಶೋಧನೆಗಳಿಗಾಗಿ ಜೀವಂತ ಪ್ರಾಣಿಗಳ ದೇಹವನ್ನು ಛಿದ್ರ ಛಿದ್ರ ಮಾಡಿ ಮಾಹಿತಿಗಳನ್ನು ಪಡೆಯುವ ವಿಧಾನ (ವೀವಿಸೆಕ್ಷನ್) ಕ್ರಿ.ಪೂ 300ಕ್ಕಿಂತಲೂ ಹಿಂದೆಯೇ ಪ್ರಾಚೀನ ಈಜಿಪ್ಟನ ಅಲೆಗ್ಸಾಂಡ್ರಿಯ ವಿಶ್ವವಿದ್ಯಾಲಯದ ವ್ಯಾಸಂಗ ವಿಧಾನದಲ್ಲಿ ಇದು ಬಳಕೆಯಲ್ಲಿತ್ತೆಂದು ತಿಳಿದು ಬಂದಿದೆ.  ಪ್ರಾಯೋಗಿಕ ದೇಹಕಾರ್ಯ ವಿಜ್ಞಾನ ವ್ಯಾಸಂಗದ ಜನಕನೆಂದು ಪ್ರಸಿದ್ಧವಾದ ಇಂಗ್ಲೆಂಡಿನ ವಿಲಿಯಮ್ ಹಾರ್ವೆ ಈ ಮಾರ್ಗವನ್ನು ಅನುಸರಿಸಿಯೇ ರಕ್ತ ಪರಿಚಲನಾಕ್ರಮ ಹಾಗೂ ಗುಂಡಿಗೆಯ ಕವಾಟಗಳ ಕ್ರಿಯಾವಿಧಾನವನ್ನು ವಿಶದೀಕರಿಸಿದ. ಕರುಳಿನ ದುಗ್ಧರಸನಾಳಗಳನ್ನು ದುಗ್ಧರಸ ಪ್ರವಾಹ.  ಅಪಧಮನಿಗಳ ಉಬ್ಬರಸ್ಥಿತಿಯ (ಅನ್ಯೂರಿಸಮ್) ಶಸ್ತ್ರಚಿಕಿತ್ಸಾಕ್ರಮ ರೋಗರಕ್ಷಣೆ ನಿವಾರಣೆಗಳಿಗಾಗಿ ತಯಾರಿಸಬಲ್ಲ ಪ್ರತಿವಿಷಲಸಿಕೆಗಳು ಇತ್ಯಾದಿ ವಿಷಯಗಳ ಜ್ಞಾನಾರ್ಜನೆ ಆದದ್ದೂ ಈ ವಿಧಾನದಿಂದಲೇ ವ್ಯಾಸಂಗಕ್ಕಾಗಿ ಪ್ರಾಣಿಗಳನ್ನು ನೋವುಸಾವುಗಳಿಗೆ ಈಡು ಮಾಡುವುದು ಅನೇಕ ಜನರಿಗೆ ಒಪ್ಪಿತವಾಗದೆ ಇವರು ಜೀವಂತ ದೇಹಚ್ಚೇದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಲೇ ಇದ್ದರು.  ಕ್ಲಾಡ್ ಬರ್ನಾರ್ಡ್ ಎಂಬ ಫ್ರೆಂಚ್ ವಿಜ್ಞಾನಿಯ ಹೆಂಡತಿ ಮತ್ತು ಮಗಳೇ ಇಂಥ ವಿರೋಧದಿಂದ ಅವನನ್ನು ದೂರೀಕರಿಸಿ ತತ್ಫಲವಾಗಿ ಅವನ ಸಂಸಾರಸುಖ ಹಾಳಾದ ಉಲ್ಲೇಖ ಉಂಟು. ಆದರೆ ಜೀವಂತ ದೇಹಚ್ಛೇದಕ್ಕೆ ಬರ್ನಾರ್ಟನ ಜೊತೆಗೆ ಲೂಯಿ ಪಾಸ್ತರನಂಥ ಇನ್ನು ಹಲವು ವಿಜ್ಞಾನಿಗಳ ಬೆಂಬಲ ಮಾತ್ರವೇ ಅಲ್ಲದೆ ಅನೇಕ ವಿದ್ಯಾಭ್ಯಾಸ ತಜ್ಞರ  ಬೆಂಬಲವೂ ಇತ್ತು. ವೈದ್ಯಕೀಯ ಜ್ಞಾನಾರ್ಜನೆಗೆ ಈ ಮಾರ್ಗ ಬಲು ಉಪಯುಕ್ತ; ಮಾನವನೇ ಅಲ್ಲದೇ ಸ್ವತಃ ಪ್ರಾಣಗಳ ಜೇವರಕ್ಷಣೆ ರೋಗಚಿಕಿತ್ಸೆ ಸಂಕಟ ನಿವಾರಣೆಗಳಿಗೆ ಅಗತ್ಯವಾದ ಕ್ರಮಗಳನ್ನು ಕಂಡುಕೊಳ್ಳಲು ಇಂಥ ಜ್ಞಾನಾರ್ಜನೆಯೇ ಮೂಲ; ಇದನ್ನು ಲಕ್ಷ್ಯದಲ್ಲಿಟ್ಟು ಕೊಂಡು ಜೀವಂತ ದೇಹಚ್ಛೇದವನ್ನು ನಿಷೇಧಿಸಬಾರದು ಎಂದು ಇವರ ವಾದ. ಆದರೂ 19ನೆಚಿiÀು ಶತಮಾನದ ಅಚಿತ್ಯ 20ನೆಚಿiÀು ಶತಮಾನದ ಪ್ರಾರಂಭದಲ್ಲಿ ಜೀವಂತ ದೇಹಚ್ಛೇದ ವಿರೋಧಿಗಳ (ಆಂಟಿವೀವಿಸೆಕ್ಷನಿಸ್ಟ್) ಚಟುವಟಿಕೆಯಿಂದಾಗಿ ಜೀವಂತ ದೆಹಚ್ಛೇದ ನಿಷಿದ್ದ ಮಾರ್ಗವಾಯಿತು.  ಇಂದು ವ್ಯಾಸಂಗಕ್ಕಾಗಿ ಜೀವಂತ ದೇಹಚ್ಛೇದ ಮಾಡುವ ಬದಲು ಪ್ರಾಣಿಗಳ ಮೇಲೆ ಇತರ ರೀತಿಯ ಪ್ರಯೋಗಗಳನ್ನು ಮಾಡುವುದು ರೂಢಿಗೆ ಬಂದಿದೆ.  ಅನೇಕ ಕಡೆ ಹಾಗೆ ಮಾಡಲು ಸಕಾರದ ಅನುಮತಿ ಅಗತ್ಯ. ಪ್ರಯೋಗಗಳಿಗೆ ಪ್ರಾಣಿಗಳನ್ನು ಒಡ್ಡಿದಾಗ ಅವುಗಳಿಗೆ ನೋವಾಗದಂತೆ ಸಂವೇದನಾನಾಶಕಗಳನ್ನು ಬಳಸಬೇಕು ಅಲ್ಲದೆ ಪ್ರಯೋಗಗಳ ಕೊನೆಯಲ್ಲಿ ಅವು ಬದುಕುಳಿಯುವುದು ಅನಪೇಕ್ಷಣೀಯವಾದರೆ ಅವಕ್ಕೆ ಸುಖ ಮರಣವನ್ನು (ಯೂಥನೇಸಿಯ) ಒದಗಿಸಬೇಕು. ಇವು ವಿಧೇಯಕ.  (ಡಿಎಸ್‍ಎಸ್; ಎಸ್‍ಆರ್‍ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ